AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ದಾನ ಮಾಡುವ ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು

ರಕ್ತದಾನ ಶ್ರೇಷ್ಠ ದಾನ. ಒಂದು ಹನಿ ರಕ್ತ ಒಂದು ಅಮೂಲ್ಯ ಜೀವವನ್ನು ಉಳಿಸಲು ನೆರವಾಗುತ್ತದೆ. ಇದೇ ಕಾರಣದಿಂದ ಅಗತ್ಯವಿರುವ ಸಂದರ್ಭದಲ್ಲಿ ಲಕ್ಷಾಂತರ ಜನ ರಕ್ತದಾನ ಮಾಡುವಂತಹ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ನೀವು ಕೂಡಾ ರಕ್ತ ದಾನ ಮಾಡುತ್ತೀರಾ? ಹಾಗಿದ್ರೆ ರಕ್ತದಾನ ಮಾಡುವ ಮೊದಲು ಯಾವೆಲ್ಲಾ ಆಹಾರವನ್ನು ಸೇವನೆ ಮಾಡಬೇಕು ಎಂಬುದನ್ನು ತಪ್ಪದೆ ತಿಳಿಯಿರಿ.

ಮಾಲಾಶ್ರೀ ಅಂಚನ್​
|

Updated on: Jul 02, 2025 | 8:35 PM

Share
ಬೀಟ್ರೂಟ್:‌ ಬೀಟ್ರೂಟ್‌ ನೈಟ್ರೇಟ್‌ ಮತ್ತು ಕಬ್ಬಿಣಾಂಶಗಳಿಂದ ಹೇರಳವಾಗಿದೆ. ಇವು ಹಿಮೋಗ್ಲೋಬಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಇದು ರಕ್ತವನ್ನು ಆರೋಗ್ಯಕರವಾಗಿಸುತ್ತದೆ. ಆದ್ದರಿಂದ ರಕ್ತ ದಾನ ಮಾಡುವ ಮುನ್ನ ಬೀಟ್ರೂಟ್‌ ಸೇವನೆ ಮಾಡುವುದು ಉತ್ತಮ.

1 / 7
ಮೊಟ್ಟೆ: ಮೊಟ್ಟೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಪ್ರೋಟೀನ್‌ ಮತ್ತು ವಿಟಮಿನ್‌ ಬಿ 12 ಇವುಗಳಲ್ಲಿ ಹೇರಳವಾಗಿದೆ. ಇವು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಕ್ತದಾನ ಮಾಡಿದ ನಂತರ ಬರುವ ಆಯಾಸ ಆಲಸ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2 / 7
ಪಾಲಕ್‌ ಸೊಪ್ಪು: ಪಾಲಕ್‌ ಸೊಪ್ಪಿನಲ್ಲಿ ಕಬ್ಬಿಣ ಮತ್ತು ಪೋಲೇಟ್‌ ಅಂಶವು ಅಧಿಕವಾಗಿದ್ದು, ಇದು ಹಿಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚಿಸಲು ಸಹಕಾರಿ. ಅದಕ್ಕಾಗಿಯೇ ರಕ್ತದಾನ ಮಾಡುವ ಒಂದು ಅಥವಾ ಎರಡು ದಿನಕ್ಕೆ ಮೊದಲು ಪಾಲಕ್‌ ಸೊಪ್ಪನ್ನು ಸೇವನೆ ಮಾಡುವುದು ಉತ್ತಮ.

3 / 7
ಕಿತ್ತಳೆ ಹಣ್ಣು: ಸಿಟ್ರಸ್‌ ಹಣ್ಣುಗಳಲ್ಲಿ ಒಂದಾಗಿರುವ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇವು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ  ರಕ್ತಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಕಾರಿ.

4 / 7
ಬಾದಾಮಿ: ಬಾದಾಮಿಯಲ್ಲಿ ಪ್ರೋಟೀನ್‌ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ನಮ್ಮನ್ನು ಆರೋಗ್ಯಕರವಾಗಿಡುತ್ತವೆ. ಮತ್ತು ರಕ್ತದಾನ ಮಾಡಿದ ನಂತರ ಉಂಟಾಗುವ ಆಯಾಸವನ್ನು ತಡೆಯುತ್ತವೆ.

5 / 7
ಮಟನ್:‌ ಮಟನ್‌ನಲ್ಲಿ ಕಬ್ಬಿಣ ಮತ್ತು ಪ್ರೋಟೀನ್‌ ಅಧಿಕವಾಗಿರುತ್ತದೆ. ಇವು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ರಕ್ತದಾನ ಮಾಡುವ ಮೊದಲು ಮಟನ್‌ ತಿನ್ನುವುದು ತುಂಬಾ ಒಳ್ಳೆಯದು. ಇದು ಉತ್ತಮ ಶಕ್ತಿಯನ್ನು ಸಹ ನೀಡುತ್ತವೆ.

6 / 7
ಸಾಕಷ್ಟು ನೀರು ಕುಡಿಯಿರಿ: ನಮ್ಮ ದೇಹದ ಅರ್ಧದಷ್ಟು ರಕ್ತ ನೀರಿನಿಂದ ಕೂಡಿದೆ. ರಕ್ತದಾನ ಪ್ರಕ್ರಿಯೆಯಲ್ಲಿ ನೀವು ಸ್ವಲ್ಪ ದ್ರವಾಂಶವನ್ನು ಕಳೆದುಕೊಂಡಾಗ, ರಕ್ತದೊತ್ತಡದ ಮಟ್ಟ ಕಡಿಮೆಯಾಗಬಹುದು. ಇದರಿಂದ ತಲೆ ತಿರುಗಿದಂತಾಗಬಹುದು. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.

7 / 7
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!

ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ

ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ

ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ

ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ

ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?

ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು

ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು

OSZAR »