ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?

Pic Credit: pinterest

By Malashree Anchan

26 june 2025

 ಮದುವೆ

ಪ್ರೀತಿಗೆ ವಯಸ್ಸು, ಧರ್ಮ, ಜಾತಿ ಅಡ್ಡಿ ಆಗೋಲ್ಲ ಎಂದು ಹೇಳ್ತಾರೆ. ಆದ್ರೆ ಮದುವೆ  ವಿಷಯಕ್ಕೆ ಬಂದಾಗ ನಮ್ಮ ಸಮಾಜದಲ್ಲಿ ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ವಯಸ್ಸು

ಮದುವೆ ವಿಷಯಕ್ಕೆ ಬಂದಾಗ ಮದುವೆ ಆಗುವ ಹುಡುಗನ ವಯಸ್ಸು ಹುಡುಗಿಗಿಂತ ಹೆಚ್ಚಿರಲೇಬೇಕು. ಕನಿಷ್ಠ 3 ರಿಂದ 5 ವರ್ಷಗಳ ಏಜ್‌ ಗ್ಯಾಪ್‌ ಇರಬೇಕು ಎಂದು ಹೇಳಲಾಗುತ್ತದೆ.

ಪ್ರೇಮ ವಿವಾಹ

ಪ್ರೇಮ ವಿವಾಹಗಳಲ್ಲಿ ವಯಸ್ಸಿನ ಅಂತರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ವಯಸ್ಸು ಮುಖ್ಯ ಅಲ್ಲ, ಮುಖ್ಯವಾಗಿ ಬೇಕಾದದ್ದು, ಪ್ರೀತಿ, ನಂಬಿಕೆ, ವಿಶ್ವಾಸ ಎಂದು ಹೇಳ್ತಾರೆ.

ಸುಖ ದಾಂಪತ್ಯ

ಹೌದು ಹೀಗೆ ಹಲವರು ತನಗಿಂತ ವಯಸ್ಸಿನಲ್ಲಿ ಹಿರಿಯವಳನ್ನು ಮದುವೆಯಾಗಿ, ತನಗಿಂತ 10-15 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.

ತಜ್ಞರ ಅಭಿಪ್ರಾಯ

ಗಂಡ ಹೆಂಡತಿ ನಡುವೆ 5 ರಿಂದ 7 ವರ್ಷಗಳ ವಯಸ್ಸಿನ ಅಂತರ ಇರಬೇಕು.  ಮಹಿಳೆಯರು ತಮಗಿಂತ ದೊಡ್ಡ ವಯಸ್ಸಿನ ಪುರುಷನನ್ನೇ ಮದುವೆಯಾಗಬೇಕು ಎಂದು ತಜ್ಞರು ಹೇಳುತ್ತಾರೆ.

ಚಾಣಕ್ಯ ನೀತಿ

ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ, ಗಂಡ ಮತ್ತು ಹೆಂಡತಿಯ ನಡುವೆ 3 ರಿಂದ 5 ವರ್ಷಗಳ ವಯಸ್ಸಿನ ಅಂತರವಿರುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಮನಸ್ತಾಪ

ಗಂಡ-ಹೆಂಡ್ತಿ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೆ, ಜೀವನದ ವಿಭಿನ್ನ ದೃಷ್ಟಿಕೋನಗಳಿಂದಾಗಿ ಮನಸ್ತಾಪಗಳು ಉಂಟಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ.

ಪ್ರಬುದ್ಧತೆ

ಒಟ್ಟಾರೆಯಾಗಿ ನೋಡುವುದಾದರೆ ಪತಿ ಪತ್ನಿಯರ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆ, ನಂಬಿಕೆ, ಪ್ರೀತಿ, ಪ್ರಬುದ್ಧತೆ ಇರುವುದು ಬಹಳ ಮುಖ್ಯವಾಗಿದೆ.

OSZAR »