ಓದುವಾಗ ನಿದ್ದೆ ಬರಬಾರದು ಎಂದ್ರೆ ಈ ಟಿಪ್ಸ್‌ ಪಾಲಿಸಿ

Pic Credit: pinterest

By Malashree Anchan

26 june 2025

ನಿದ್ರೆ

ಎಲ್ಲರಿಗೂ ಪುಸ್ತಕ ತೆರೆದು ಓದುವಾಗಲೇ ಸಿಕ್ಕಾಪಟ್ಟೆ ನಿದ್ರೆ ಬಂದಂತಾಗುತ್ತದೆ. ಈ ಕೆಲವು ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

ಸರಿಯಾದ ಭಂಗಿ

ಹೆಚ್ಚಿನವರು ಮಲಗಿ ಓದುವಂತಹದ್ದನ್ನು ಮಾಡುತ್ತಾರೆ. ಇದರ ಬದಲು ಸರಿಯಾದ ಭಂಗಿಯಲ್ಲಿ ಕುರ್ಚಿಯ ಮೇಲೆ ಕುಳಿತು ಓದುವ ಅಭ್ಯಾಸವನ್ನು ಮಾಡಿ.

ವಿರಾಮ

ನಿರಂತರವಾಗಿ ಓದುವ ಬದಲು ಪ್ರತಿ 15 ಅಥವಾ 25 ನಿಮಿಷಗಳಿಗೊಮ್ಮೆ ಸ್ವಲ್ಪ ವಿರಾಮ ತೆಗೆದುಕೊಳ್ಳಿ.

ಮುಖ ತೊಳೆಯಿರಿ

ಓದುವಾಗ ನಿದ್ದೆ ಬಂದಂತಾದರೆ ತಕ್ಷಣ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಅದರಲ್ಲೂ ಕಣ್ಣುಗಳ ಮೇಲೆ ತಣ್ಣೀರು ಸಿಂಪಡಿಸುವುದು ಒಳ್ಳೆಯದು.

ಹಗುರವಾದ ಆಹಾರ

ನೀವು ಓದಲು ಕೂರುವುದಕ್ಕಿಂತ ಮುಂಚೆ ಜಾಸ್ತಿ ಆಹಾರ ಸೇವನೆ ಮಾಡಬಾರದು. ಇದರಿಂದ ನಿದ್ರೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ  ಹಗುರವಾದ ಆಹಾರವನ್ನೇ ಸೇವಿಸಿ.

ಚಾಕೊಲೇಟ್‌

ಓದುವಾಗ ಮಧ್ಯೆ ಮಧ್ಯೆ ನಟ್ಸ್‌, ಹಣ್ಣು, ಡಾರ್ಕ್‌ ಚಾಕೊಲೇಟ್‌ಗಳನ್ನು ತಿನ್ನಿ. ಇದು ನಿದ್ರೆ ಬಾರದಂತೆ ತಡೆಯಲು ಮತ್ತು ಅಧ್ಯಯನದತ್ತ ಗಮನ ಹರಿಸಲು ಸಹಕಾರಿಯಾಗಿದೆ.

ಬೆಳಕು

ಸರಿಯಾದ ಬೆಳಕು ಬೀಳದಿರುವ ಸ್ಥಳದಲ್ಲಿ ಓದಲು ಕುಳಿತರೆ  ಕಣ್ಣುಗಳಿಗೆ ಆಯಾಸವಾಗಿ ನಿದ್ರೆ ಬಂದಂತಾಗಬಹುದು. ಹಾಗಾಗಿ ಸಾಕಷ್ಟು ಬೆಳಕು ಬೀಳುವ ಕಡೆ ಓದಲು ಕುಳಿತುಕೊಳ್ಳಿ.

ಚೂಯಿಂಗ್‌ ಗಮ್‌

ಓದುವಾಗ ನಿದ್ರೆ ಬರಬಾರದು ಎಂದ್ರೆ ನೀವು ಚೂಯಿಂಗ್‌ ಗಮ್‌ಗಳನ್ನು ಸಹ ಅಗಿಯಬಹುದು.

OSZAR »