ಬಿಸಿಲು ನಾಡು ಬೀದರ್ನಲ್ಲಿ ಗೋಡಂಬಿ ಬಳೆದ ರೈತ: ಅಪಾರ ಆದಾಯ
ಮಲೆನಾಡಿನಿಂದ ಬಂದ ಗೋಡಂಬಿ ಬೆಳೆ ಬೀದರ್ ರೈತರ ಜೀವನವನ್ನು ಬದಲಾಯಿಸಿದೆ. ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ಬಳಲುತ್ತಿದ್ದ ಈ ಪ್ರದೇಶದಲ್ಲಿ, ಗೋಡಂಬಿ ಬೆಳೆ ಲಕ್ಷಾಂತರ ರೂಪಾಯಿ ಆದಾಯವನ್ನು ನೀಡುತ್ತಿದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಈ ಬೆಳೆ, 400 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯುತ್ತಿದ್ದು, ರೈತರ ಮುಖದಲ್ಲಿ ಸಂತೋಷ ತಂದಿದೆ. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ.
ಕೇವಲ ಮಲೆನಾಡಿಗಷ್ಟೇ ಸೀಮಿತವಾಗಿದ್ದ ಗೋಡಂಬಿ ಬೆಳೆ ಈಗ ಬೀಸಲ ನಗರಿ ಗಡೀ ಜಿಲ್ಲೆ ಬೀದರ್ ಗೂ ಕಾಲಿಟ್ಟಿದೆ. ಅತೀವೃಷ್ಠಿ ಹಾಗೂ ಅನಾವೃಷ್ಠಿಗೆ ತುತ್ತಾಗಿದ್ದ ಜಿಲ್ಲೆಯ ಜನರಿಗೆ ಗೋಡಂಬಿ ಬೆಳೆ ಕೈ ಹಿಡಿದಿದೆ. ಬಡವರ ಬೆಳೆ ಶ್ರೀಮಂತರ ಆಹಾರ ಎಂದೇ ಕರೆಯಿಸಿಕೊಳ್ಳುವ ಗೋಡಂಬಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಲಕ್ಷಾಂತರ ರೂಪಾಯಿ ಆದಾಯದ ನಿರಿಕ್ಷೆಯಲ್ಲಿದ್ದಾರೆ.
1 / 9
ಬಯಲು ಸೀಮೆಯ ಬರಡು ಭೂಮಿಯಲ್ಲಿ ಗೋಡಂಬಿಯ ಬಂಪರ್ ಬೆಳೆಯನ್ನು ಬೆಳೆಯುವುದರ ಮೂಲಕ ಬೀದರ್ ಜಿಲ್ಲೆಯ ರೈತರು ಸೈ ಎಣಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರಿ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಗೇರು ಗಿಡನೆಟ್ಟ ರೈತರು ಉತ್ತಮ ಲಾಭ ಪಡೆಯುವ ನಿರಿಕ್ಷೆಯಲ್ಲಿದ್ದಾರೆ. ಕೇವಲ ಮಲೆನಾಡಿಗಷ್ಟೇ ಸೀಮತವಾಗಗಿದ್ದ ಗೋಡಂಬಿ ಬೆಳೆ ಬೀದರ್ ಜಿಲ್ಲೆಗೂ ಕಾಲಿಟ್ಟು ರೈತರ ಪಾಲಿಗೆ ಹಣ ನೀಡುವ ಯಂತ್ರವಾಗಿ ಪರಿಣಮಿಸಿದೆ.
2 / 9
ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಂತೆ ಶೂನ್ಯ ಬಂಡವಾಳದೊಂದಿಗೆ ಬೆಳೆದ ಗೋಡಂಬಿ ಬೆಳೆಯಿಂದ ರೈತರು ಸಾಂಪ್ರದಾಯಿಕ ಬೆಳೆಗಳಷ್ಟೇ ಆದಾಯ ಪಡೆಯುತ್ತಿದ್ದಾರೆ. ಜವಗು ಮಿಶ್ರಿತ ಕೆಂಪು ಭೂ ಪ್ರದೇಶವನ್ನು ಹೊಂದಿರುವ ಬೀದರ್ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಗೋಡಂಬಿ ಮರಗಳು ನಿರೀಕ್ಷಗೂ ಮಿರಿ ಆದಾಯವನ್ನು ನೀಡುತ್ತಿವೆ.
3 / 9
ಯಾವುದೆ ರಾಸಾಯನಿಕ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಜಮೀನಿನ ಬದುವಿನಲ್ಲಿ ಹಾಕಲಾದ ಗೋಡಂಬಿ ಬೀಜಗಳು ನೈಸರ್ಗಿಕ ಕೃಷಿ ಪದ್ಧತಿಯಿಂದಾಗಿ ಹುಲುಸಾಗಿ ಬೆಳೆದು ಇದೀಗ ಲಕ್ಷ ಲಕ್ಷ ರೂಪಾಯಿ ಆದಾಯ ಬರುವಂತೆ ಮಾಡಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ರೈತರ ಪಪ್ಪು ಪಾಟೀಲ್ ಅವರು ಕೂಡಾ ತಮ್ಮ ಹೊಲದಲ್ಲಿ ಸುಮಾರು ಐದು ಎಕರೆಯಷ್ಟು ಪ್ರದೇಶದಲ್ಲಿ ಗೋಡಂಬಿ ಬೆಳೆದಿದ್ದಾರೆ.
4 / 9
ಐದು ಎಕರೆಯಷ್ಟು ಜಮೀನಿನಲ್ಲಿ ಬೆಳೆಸಿದ ಗೋಂಡಬಿ ಚೆನ್ನಾಗಿ ಬಂದಿದ್ದು ಸುಮಾರು 20 ಕ್ಷಿಂಟಾಲ್ ವರೆಗೆ ಬೀಜಗಳು ಬರಬಹುದೆಂದು ಅಂದಾಜು ಮಾಡಿದ್ದು ಲಕ್ಷಾಂತರ ರೂಪಾಯಿ ಅದಾಯ ಘಳಿಸುವ ನಿರಿಕ್ಷೇಯನ್ನ ರೈತ ಹೊಂದಿದ್ದಾರೆ.
5 / 9
ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಭಾಲ್ಕಿ ಹಾಗೂ ಬೀದರ್ ತಾಲೂಕಿನಲ್ಲಿ ಗೇರು ಗಿಡಗಳನ್ನ ನೆಟ್ಟಿದ್ದು ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮ ಒಂದರಲ್ಲಿಯೇ 10 ಹೆಕ್ಟರ್ಗೂ ಅಧಿಕ ಗೇರು ಗಿಡಗಳನ್ನು ನೆಟ್ಟಿದ್ದು ಅದರಿಂದಾಗಿ ಲಾಭ ಪಡೆಯುತ್ತಿದ್ದಾರೆ. ಬೀದರ್ ಜಿಲ್ಲೆಯ ಹವಾಮಾನಕ್ಕೆ ಗೇರು ಗಿಡಗಳನ್ನು ನೆಟ್ಟರೇ ಉತ್ತಮ ಇಳುವರಿಯನ್ನು ಕೊಡುತ್ತದೆ ಎಂದು ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆಯನ್ನು ನೀಡಿದ್ದರು.
6 / 9
ಅಧಿಕಾರಿಗಳ ಸಲಹೆಯಂತೆ ರೈತರು ಸಾಲ ಮಾಡಿ ಗೇರು ಗಿಡಗಳನ್ನು ಖರೀದಿಸಿ ನೆಟ್ಟಿದ್ದಾರೆ. ಇಷ್ಟೊಂದು ವೈಶಿಷ್ಟ್ಯಪೂರ್ಣ ಗೋಡಂಬಿಯನ್ನು ಉತ್ತಮ ರೀತಿಯಲ್ಲಿ ಬೆಳೆದು ಇತರ ತೋಟಗಾರಿಕೆ ಬೆಳೆಗಾರರಿಗೆ ಮಾದರಿಯಾಗಿ ಗೋಡಂಬಿ ಬೆಳೆಗಾರರು ನಿಂತಿದ್ದಾರೆ. ಸರ್ಕಾರದ ಯಾವುದೇ ಪ್ರೋತ್ಸಾಹ ಧನ, ಪಡೆಯದೆ ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನಲ್ಲಿ ಸುತ್ತಲೂ ಪ್ರಾಯೋಗಿಕವಾಗಿ ಜಿಲ್ಲೆಯ ನೂರಾರು ರೈತರು ಗೋಡಂಬಿ ಗಿಡನೆಟ್ಟು ಈಗ ಕೈತುಂಬ ಹಣ ಪಡೆಯುತ್ತಿದ್ದಾರೆ.
7 / 9
ಗೋಡಂಬಿಯ ಬೀಜವನ್ನು ಉತ್ತರ ಕನ್ನಡ ಜಿಲ್ಲೆಯಿಂದ ತಂದು ತಮ್ಮ ಬರಡು ಭೂಮಿಯಲ್ಲಿ ಗಿಡ ನೆಟ್ಟು ಇದೀಗ ಪ್ರತಿ ವರ್ಷ ಸಾಂಪ್ರದಾಯಿಕ ವಾರ್ಷಿಕ ಬೆಳೆ ನೀಡುವ ಆದಾಯಕ್ಕಿಂತ ಹೆಚ್ಚು ಆದಾಯ ಈ ಗೋಡಂಬಿಯಿಂದ ರೈತರು ಪಡೆಯುತ್ತಿದ್ದಾರೆ. ಗೋಡಂಬಿ ಬೆಳೆ ಬೆಳೆಯಲು ಸೂಕ್ತವಾದ ವಾತಾವರಣ ಮತ್ತು ಅದಕ್ಕೆ ಬೇಕಾದ ಕೆಂಪು ಮಿಶ್ರಿತ ಮಣ್ಣು ಬೀದರ್ ಜಿಲ್ಲೆಯಲ್ಲಿ ಇರುವುದರಿಂದ ರೈತರು ಗೋಡಬಿ ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಖಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ.
8 / 9
ಗೋಡಂಬಿ ಇಳುವರಿ ಎಕರೆಗೆ 10-12 ಬರುವ ನಿರೀಕ್ಷೆ ಇದೆ. ಇನ್ನು, ಇವರು ಬೆಳೆದಿರುವ ಗೇರು ಬೀಜವನ್ನ ಗ್ರಾಮಕ್ಕೆ ಬಂದು ಖರಿದಿಸಿಕೊಂಡು ಹೋಗುತ್ತಿರುವುದರಿಂದ ಮಾರುಕಟ್ಟೆಯ ಸಮಸ್ಯೆಯೂ ಕೂಡಾ ಇವರಿಗಿಲ್ಲ ಹೀಗಾಗಿ ಗೇರು ಬೀಜದಿಂದ ಲಾಭ ಪಡೆಯುತ್ತಿದ್ದಾರೆ.