AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯವರನ್ನು ಸರ್ವಾಧಿಕಾರಿ ಅನ್ನುವವರು ಒಮ್ಮೆ ತುರ್ತುಪರಿಸ್ಥಿಯನ್ನು ನೆನಪಿಸಿಕೊಳ್ಳಲಿ: ಅನ್ನಪೂರ್ಣದೇವಿ

ಪ್ರಧಾನಿ ಮೋದಿಯವರನ್ನು ಸರ್ವಾಧಿಕಾರಿ ಅನ್ನುವವರು ಒಮ್ಮೆ ತುರ್ತುಪರಿಸ್ಥಿಯನ್ನು ನೆನಪಿಸಿಕೊಳ್ಳಲಿ: ಅನ್ನಪೂರ್ಣದೇವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2025 | 12:08 PM

Share

ನೆರೆರಾಷ್ಟ್ರ ಪಾಕಿಸ್ತಾನದ ಹೇಡಿತನದ ಉಗ್ರಗಾಮಿ ಕೃತ್ಯಕ್ಕೆ ಆಪರೇಶನ್ ಸಿಂಧೂರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವತ್ತೂ ಮರೆಯಲಾಗದ ಪಾಠ ಕಲಿಸಿದ್ದಾರೆ. 23 ರಾಷ್ಟ್ರಗಳ ಅತ್ಯುನ್ನತ ಗೌರವಗಳಿಂದ ಪುರಸ್ಕೃತರಾಗಿರುವ ಮೋದಿಯವರ ಭಾರತಕ್ಕೆ ಈಗ ಯಾವುದೂ ಅಸಂಭವವಲ್ಲ ಎಂದು ಕೇಂದ್ರ ಸಚಿವೆ ಅನ್ನಪೂರ್ಣದೇವಿ ಬೆಳಗಾವಿಯಲ್ಲಿ ಹೇಳಿದರು.

ಬೆಳಗಾವಿ, ಜೂನ್ 28: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸರ್ವಾಧಿಕಾರ ಮನೋಭಾವದ ನಾಯಕ ಎಂದು ಕರೆಯುವವರು ಸರಿಯಾಗಿ 50 ವರ್ಷಗಳ ಹಿಂದೆ ಇಂದಿರಾ ಗಾಂಧಿಯವರು ಏನು ಮಾಡಿದ್ದರು ಅನ್ನೋದನ್ನು ನೆನಪಿಸಿಕೊಳ್ಳಬೇಕು. ಕೇವಲ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಎಲ್ಲ ಕ್ಷೇತ್ರಗಳಲ್ಲಿನ ಜನರ ಸ್ವಾತಂತ್ರ್ಯವನ್ನು ಕಸಿದು ಜೈಲಿಗೆ ಹಾಕುವ ಮೂಲಕ ಇಡೀ ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಿದರು ಎಂದು ಕೇಂದ್ರ ಸಚಿವೆ ಅನ್ನಪೂರ್ಣದೇವಿ (Annapurna Devi, Union Minister) ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಪ್ರಧಾನಿ ಮೋದಿಯವರು ಕಳೆದ 11 ವರ್ಷಗಳಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯೊಂದಿಗೆ ದೇಶದ ಯುವಕರು, ಮಹಿಳೆಯರು, ರೈತರು ಮತ್ತು ಬಡವರನ್ನು ಜೊತೆಗೂಡಿಸಿಕೊಂಡು ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಾ ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸಿದ್ದಾರೆ ಎಂದು ಅನ್ನಪೂರ್ಣದೇವಿ ಹೇಳಿದರು. ಮೋದಿಯವರು ಪ್ರಧಾನಿಯಾದ ಬಳಿಕ ಅರ್ಟಿಕಲ್ 370, 35 ಎ, ಟ್ರಿಪಲ್ ತಲ್ಲಾಖ್ ಮೊದಲಾದ ಮಹತ್ತರ ನಿರ್ಣಯಗಳನ್ನು ತೆಗದುಕೊಂಡು ಭಾರತೀಯರು ತಮ್ಮನ್ನು ತಾವು ಗೌರವಾನ್ವಿತರು ಎಂದು ಭಾವಿಸುವ ಸನ್ನಿವೇಶ ಸೃಷ್ಟಿಸಿದ್ದಾರೆ ಎಂದು ಅನ್ನಪೂರ್ಣದೇವಿ ಹೇಳಿದರು.

ಇದನ್ನೂ ಓದಿ: ಪ್ರಗತಿ ಸಭೆ: ರಕ್ಷಣೆ, ರೈಲ್ವೆ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿ ಪರಿಶೀಲಿಸಿದ ಪ್ರಧಾನಿ ಮೋದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

OSZAR »