ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಕಾರ್ಯಕರ್ತರನ್ನು ನೆನೆಪಿಸಿಕೊಂಡರೆ ಪಕ್ಷ ಬೆಳೆಯಲಾರದು: ಶರಣಗೌಡ ಕಂದ್ಕೂರ್
ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ಅವರನ್ನು ಬಿಟ್ಟರೆ ಉಳಿದವರೆಲ್ಲ, ಹೆಚ್ ಡಿ ದೇವೇಗೌಡರ ಗರಡಿಯಲ್ಲಿ ಬೆಳೆದವರು ಅನ್ನೋದು ಗಮನಿಸಬೇಕಾದ ಸಂಗತಿ, ಬಹಳಷ್ಟು ನಾಯಕರು ಒಂದು ಹಂತಕ್ಕೆ ಬೆಳೆಯುವವರೆಗೆ ಪಕ್ಷವನ್ನು ಬಳಸಿಕೊಳ್ಳುತ್ತಾರೆ, ನಂತರ ಬೇರೆ ಪಕ್ಷಕ್ಕೆ ಹೋಗಿ ತಮ್ಮನ್ನು ಬೆಳೆಸಿದ ಪಕ್ಷವನ್ನು ಮರೆಯುತ್ತಾರೆ ಎಂದು ಶರಣಗೌಡ ಕಂದ್ಕೂರ್ ಹೇಳಿದರು.
ಕಲಬುರಗಿ, ಜುಲೈ 4: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಸದಸ್ಯತ್ವ ನೋಂದಣಿ ಅಭಿಯಾನದ ಭಾಗವಾಗಿ ಇಂದು ಜೇವರ್ಗಿಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (Sharangouda Kandkur), ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ರಾಜ್ಯ ನಾಯಕರು ಕಾರ್ಯಕರ್ತರನ್ನು ಹುಡುಕಿಕೊಂಡು ಬರುವ ಪದ್ಧತಿ ಹೋಗಬೇಕು, ಜೆಡಿಎಸ್ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವಾಗಿದ್ದರೂ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಗುರುತಿಸಿಕೊಳುತ್ತದೆ ಎಂದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಬೆಳೆಸಿರೋದು ನಿಜವಾದರೂ ತಮ್ಮ ಪಕ್ಷ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ 50 ಲಕ್ಷ ಸದಸ್ಯರನ್ನು ಮಾಡುವ ಗುರಿಯಿಟ್ಟುಕೊಂಡಿದ್ದಾರೆ, ಎಲ್ಲರು ಅವರೊಂದಿಗೆ ಕೈಜೋಡಿಸಬೇಕಿದೆ ಎಂದು ಶರಣಗೌಡ ಹೇಳಿದರು.
ಇದನ್ನೂ ಓದಿ: ಮಳೆಯಲ್ಲಿ ನೆನೆದುಕೊಂಡು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ