AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಜುಲೈ 2 ರಿಂದ 8 ದಿನಗಳ ಕಾಲ ಘಾನಾ, ಟ್ರಿನಿಡಾಡ್, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗಳಿಗೆ ಭೇಟಿ ನೀಡಲಿದ್ದಾರೆ. ಇದು ಎರಡು ಖಂಡಗಳನ್ನು ಒಳಗೊಂಡ ಅವರ ಅತ್ಯಂತ ವಿಸ್ತಾರವಾದ ಪ್ರವಾಸವಾಗಿದೆ. ಅತಿ ಕಡಿಮೆ ದಿನಗಳಲ್ಲಿ ಹೆಚ್ಚು ದೇಶಗಳಿಗೆ ಈ ಹಿಂದೆಯೂ ಕೆಲವು ಬಾರಿ ಮೋದಿ ಭೇಟಿ ನೀಡಿದ್ದರು. ಇಂಥ ಸಂದರ್ಭಗಳಲ್ಲೆಲ್ಲ ಅವರ ವೇಳಾಪಟ್ಟಿ ಹೇಗಿರುತ್ತೆ? ಈ ಬಾರಿ ಹೇಗಿರಲಿದೆ? ಇಲ್ಲಿದೆ ವಿವರ.

ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ
ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Jun 28, 2025 | 11:38 AM

ನವದೆಹಲಿ, ಜೂನ್ 28: ಪ್ರಧಾನಿ ನರೇಂದ್ರ ಮೋದಿ (Narendra Modi) ಜುಲೈ 2 ರಿಂದ 8 ದಿನಗಳ ಕಾಲ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ಇದು ಎರಡು ಖಂಡಗಳನ್ನು ಒಳಗೊಂಡ ಅವರ ಅತ್ಯಂತ ದೀರ್ಘ ಮತ್ತು ವಿಸ್ತಾರವಾದ ವಿದೇಶ ಪ್ರವಾಸಗಳಲ್ಲಿ ಒಂದಾಗಿರಲಿದೆ. ಇದರಲ್ಲಿ ಕೆಲವು ದೇಶಗಳಿಗೆ ಪ್ರಧಾನಿಯಾಗಿ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ 2016 ರಲ್ಲಿ ಜೂನ್ 4 ರಿಂದ ಜೂನ್ 8 ರವರೆಗೆ ಅಮೆರಿಕ, ಮೆಕ್ಸಿಕೊ, ಸ್ವಿಟ್ಜರ್ಲೆಂಡ್, ಅಫ್ಘಾನಿಸ್ತಾನ ಮತ್ತು ಕತಾರ್‌ಗೆ 5 ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದರು. ಆ ನಂತರ ಐದು ದೇಶಗಳಿಗೆ ಒಂದೇ ಬಾರಿ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ.

ಯಾವೆಲ್ಲ ದೇಶಗಳಿಗೆ ಭೇಟಿ ನೀಡಲಿದ್ದಾರೆ ಮೋದಿ?

ಘಾನಾ, ಟ್ರಿನಿಡಾಡ್, ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಲ್ಲಿ ಪಶ್ಚಿಮ ಆಫ್ರಿಕಾದ ಘಾನಾ ಗಣರಾಜ್ಯಕ್ಕೆ ಮೋದಿ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಇದರೊಂದಿಗೆ ಮೂರು ದಶಕಗಳ ನಂತರ ಘಾನಾಗೆ ಭಾರತದ ಪ್ರಧಾನಿ ಭೇಟಿ ನೀಡಿದಂತಾಗಲಿದೆ. ಮೊದಲಿಗೆ ಘಾನಾಕ್ಕೆ ತೆರಳುವ ಮೋದಿ, ಈ ಭೇಟಿಯ ಸಮಯದಲ್ಲಿ ಘಾನಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಹಭಾಗಿತ್ವ, ಪಾಲುದಾರಿಕೆ, ಆರ್ಥಿಕತೆ, ಇಂಧನ, ರಕ್ಷಣೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವ ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ.

ಜುಲೈ 3 ರಿಂದ 4 ಟ್ರಿನಿಡಾಡ್​ನಲ್ಲಿ ಮೋದಿ

ಜುಲೈ 3 ರಿಂದ 4 ರವರೆಗೆ ಪ್ರಧಾನಿಯವರು ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿಯಾಗಿ ಈ ದೇಶಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಭೇಟಿಯ ಸಮಯದಲ್ಲಿ ಪ್ರಧಾನಿಯವರು ಟ್ರಿನಿಡಾಡ್ ಮತ್ತು ಟೊಬಾಗೋ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲು ಮತ್ತು ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಟರ್ ಜತೆ ಮಾತುಕತೆ ನಡೆಸಲಿದ್ದಾರೆ. ಭಾರತ-ಟ್ರಿನಿಡಾಡ್ ಮತ್ತು ಟೊಬಾಗೋ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ
Image
ಸಂವಿಧಾನದ ಮೂಲ ಆಶಯ ತಿರುಚಲು ಮುಂದಾಗಿದ್ದ ಇಂದಿರಾ ಗಾಂಧಿ: ಬಿಜೆಪಿ ತಿರುಗೇಟು
Image
ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ.! ಅನುಮಾನ ಸೃಷ್ಟಿಸಿದ ಇನ್ಸ್ಟಾ ಪೋಸ್ಟ್‌
Image
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; 500ಕ್ಕೂ ಹೆಚ್ಚು ಭಕ್ತರಿಗೆ ಗಾಯ
Image
ಚರ್ಚೆ ಹುಟ್ಟು ಹಾಕಿದ ಹೊಸಬಾಳೆ 'ಸಮಾಜವಾದ-ಜಾತ್ಯಾತೀತ' ಹೇಳಿಕೆ

ಪ್ರಧಾನಿಯವರು ಅಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಮೋದಿ ಅರ್ಜೆಂಟೀನಾ ಪ್ರವಾಸ

ಭೇಟಿಯ ಮೂರನೇ ಹಂತದಲ್ಲಿ ಪ್ರಧಾನಿ ಮೋದಿ, ಜುಲೈ 4 ರಿಂದ 5 ರವರೆಗೆ ಅರ್ಜೆಂಟೀನಾ ಅಧ್ಯಕ್ಷರ ಆಹ್ವಾನದ ಮೇರೆಗೆ ಅಲ್ಲಿಗೆ ಅಧಿಕೃತ ಭೇಟಿ ನೀಡಲಿದ್ದಾರೆ. ರಕ್ಷಣೆ, ಕೃಷಿ, ಗಣಿಗಾರಿಕೆ, ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅರ್ಜೆಂಟೀನಾ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಚರ್ಚಿಸಲು ಮೋದಿ ಅಧ್ಯಕ್ಷ ಮಿಲೀ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲಿರುವ ಮೋದಿ

ಭೇಟಿಯ ನಾಲ್ಕನೇ ಹಂತದಲ್ಲಿ, ಮೋದಿ ಅವರು ಜುಲೈ 5 ರಿಂದ 8 ರವರೆಗೆ ಬ್ರೆಜಿಲ್‌ಗೆ ಭೇಟಿ ನೀಡಲಿದ್ದು, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಆಹ್ವಾನದ ಮೇರೆಗೆ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಪ್ರಧಾನಿಯವರ ಬ್ರೆಜಿಲ್‌ಗೆ ನಾಲ್ಕನೇ ಭೇಟಿಯಾಗಲಿದೆ. ಬ್ರಿಕ್ಸ್ ನಾಯಕರ ಶೃಂಗಸಭೆ ರಿಯೊ ಡಿ ಜನೈರೊದಲ್ಲಿ ನಡೆಯಲಿದೆ. ಶೃಂಗಸಭೆಯ ಸಮಯದಲ್ಲಿ ಪ್ರಧಾನ ಮಂತ್ರಿಗಳು ಜಾಗತಿಕ ಆಡಳಿತದ ಸುಧಾರಣೆ, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ, ಹವಾಮಾನ ಬದಲಾವಣೆ, ಜಾಗತಿಕ ಆರೋಗ್ಯ, ಆರ್ಥಿಕ ಮತ್ತು ಆರ್ಥಿಕ ವಿಷಯಗಳು ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಮೋದಿ ಈ ಹಿಂದಿನ ಸುದೀರ್ಘ ವಿದೇಶ ಪ್ರವಾಸಗಳು

ಪ್ರಧಾನಿ ಮೋದಿ ಈ ಹಿಂದೆ ಎಂಟು ದಿನಗಳ ಪ್ರವಾಸದಲ್ಲಿ ಆರು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. 2015 ರ ಜುಲೈನಲ್ಲಿ ರಷ್ಯಾ ಮತ್ತು ಐದು ಮಧ್ಯ ಏಷ್ಯಾದ ದೇಶಗಳಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ 2019 ರಲ್ಲಿ ಅಮೆರಿಕಕ್ಕೆ 8 ದಿನಗಳ ಪ್ರವಾಸ ಕೈಗೊಂಡಿದ್ದರು. ಆಗ ಪ್ರಧಾನಿ ಮೋದಿ ನ್ಯೂಯಾರ್ಕ್, ಹೂಸ್ಟನ್ ಮತ್ತು ಚಿಕಾಗೋಗೆ ಭೇಟಿ ನೀಡಿದ್ದರು. ನಂತರ ಮೋದಿ ವಿಶ್ವಸಂಸ್ಥೆಯ ಮಹಾ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಭಾಗವಹಿಸಿದ್ದರು.

ಪ್ರಧಾನಿ ಮೋದಿಯವರ 9 ದಿನಗಳ ದೀರ್ಘ ಪ್ರವಾಸ 2015 ರಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಕೆನಡಾಕ್ಕೆ ಭೇಟಿ ನೀಡಿದ್ದಾಗ ನಡೆದಿತ್ತು. 2014 ರಲ್ಲಿ ಅವರು ಮ್ಯಾನ್ಮಾರ್, ಆಸ್ಟ್ರೇಲಿಯಾ ಮತ್ತು ಫಿಜಿಗೆ 9 ದಿನಗಳ ದೀರ್ಘ ಪ್ರವಾಸ ಮಾಡಿದ್ದರು.

ಇದನ್ನೂ ಓದಿ: ಸಂವಿಧಾನದ ಮೂಲ ಆಶಯ ತಿರುಚಲು ಮುಂದಾಗಿದ್ದ ಇಂದಿರಾ ಗಾಂಧಿ: ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಬಿಜೆಪಿ

ಮೋದಿ ವಿದೇಶ ಪ್ರವಾಸಗಳು ಬಹಳ ಚಾಣಾಕ್ಷತನದಿಂದ ಸಿದ್ಧಪಡಿಸಿದ ವೇಳಾಪಟ್ಟಿಯಿಂದಲೇ ಪ್ರಸಿದ್ಧಿ ಹೊಂದಿವೆ. ಸುದೀರ್ಘ ಪ್ರವಾಸದ ಸಂದರ್ಭ ಸಮಯ ಉಳಿತಾಯ ಮಾಡಲು ರಾತ್ರಿಯಲ್ಲಿಯೇ ಪ್ರಯಾಣಿಸುವುದು, ಹೋಟೆಲ್​​ಗಳಲ್ಲಿ ಉಳಿಯದೇ ಇರುವುದು ಉತ್ಯಾದಿ ತಂತ್ರವನ್ನು ಅವರು ಈ ಹಿಂದೆ ಅನುಸರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:32 am, Sat, 28 June 25

OSZAR »