ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್, ವಿಡಿಯೋ ವೈರಲ್
ಮದುವೆ ವಿಚಾರಕ್ಕೆ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಸಂಬಂಧಿಕರು ಹಾಗೂ ಭಾವಿ ಬೀಗರ ನಡುವೆ ಮಾರಾಮಾರಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ (Maharashtra) ಉದ್ದಗೀರ್ ಯುವತಿಯೊಂದಿಗೆ ಪ್ರಭು ಚೌಹಾಣ್ ಮಗ ಪ್ರತೀಕ್ ಚೌಹಾಣ್‌ನೊಂದಿಗೆ ನಿಶ್ಚಿತಾರ್ಥವಾಗಿದೆ. ಈಗ ಮದುವೆ ಲೇಟಾದ ವಿಚಾರಕ್ಕೆ ಎರಡು ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಘಟನೆ ವಿಕೋಪಕ್ಕೆ ತಿರುಗಿ ಸಂಬಂಧಿಕರು ಹೊಡೆದಾಡಿಕೊಂಡಿದ್ದಾರೆ.ಈ ವೇಳೆ ಶಾಸಕ ಪ್ರಭು ಚೌಹಾಣ್ ಒಬ್ಬರಿಗೆ ಕಾಪಾಳಕ್ಕೆ ಬಾರಿಸಿದ್ದು, ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದರ್, (ಜುಲೈ 06): ಮದುವೆ ವಿಚಾರಕ್ಕೆ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಸಂಬಂಧಿಕರು ಹಾಗೂ ಭಾವಿ ಬೀಗರ ನಡುವೆ ಮಾರಾಮಾರಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ (Maharashtra) ಉದ್ದಗೀರ್ ಯುವತಿಯೊಂದಿಗೆ ಪ್ರಭು ಚೌಹಾಣ್ ಮಗ ಪ್ರತೀಕ್ ಚೌಹಾಣ್‌ನೊಂದಿಗೆ ನಿಶ್ಚಿತಾರ್ಥವಾಗಿದೆ. ಈಗ ಮದುವೆ ಲೇಟಾದ ವಿಚಾರಕ್ಕೆ ಎರಡು ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಘಟನೆ ವಿಕೋಪಕ್ಕೆ ತಿರುಗಿ ಸಂಬಂಧಿಕರು ಹೊಡೆದಾಡಿಕೊಂಡಿದ್ದಾರೆ.ಈ ವೇಳೆ ಶಾಸಕ ಪ್ರಭು ಚೌಹಾಣ್ ಒಬ್ಬರಿಗೆ ಕಾಪಾಳಕ್ಕೆ ಬಾರಿಸಿದ್ದು, ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.