Important Days in July 2025: ಜುಲೈ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಪ್ರತಿ ತಿಂಗಳು ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ದಿನಗಳನ್ನು ಆಚರಿಸಲಾಗುತ್ತದೆ. ಹಾಗಿದ್ರೆ ಜುಲೈ ತಿಂಗಳಿನಲ್ಲಿ ಯಾವೆಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜುಲೈ ತಿಂಗಳ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳುImage Credit source: Pinterest
ವರ್ಷದ ಏಳನೇ ತಿಂಗಳಾದ ಜುಲೈ ಇನ್ನೇನು ಬಂದೇ ಬಿಡ್ತು. ಪ್ರತಿ ತಿಂಗಳಿನಂತೆ ಈ ತಿಂಗಳಲ್ಲೂ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹೌದು ಪ್ರತಿ ತಿಂಗಳಲ್ಲಿಯೂ ಒಂದೊಂದು ಉದ್ದೇಶಗಳನ್ನಿಟ್ಟುಕೊಂಡು, ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ದಿನಗಳನ್ನು ಆಚರಿಸಲಾಗುತ್ತದೆ. ಜುಲೈ ತಿಂಗಳಿನಲ್ಲಿಯೂ ಕೂಡಾ ಒಂದಷ್ಟು ದಿನಗಳನ್ನು ಆಚರಿಸಲಾಗುತ್ತದೆ. ಹಾಗಿದ್ರೆ ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಚಾಕೊಲೇಟ್ ದಿನದ ವರೆಗೆ ಜುಲೈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಯಿರಿ.
ಜುಲೈ ತಿಂಗಳಲ್ಲಿ ಆಚರಿಸಲಾಗುವ ದಿನಾಚರಣೆಗಳ ಪಟ್ಟಿ ಇಲ್ಲಿದೆ:
- ಜುಲೈ 1, 2025: ರಾಷ್ಟ್ರೀಯ ವೈದ್ಯರ ದಿನ
- ಜುಲೈ 1, 2025: ರಾಷ್ಟ್ರೀಯ ಅಂಚೆ ನೌಕರರ ದಿನ
- ಜುಲೈ 1, 2025: ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
- ಜುಲೈ 2, 2025: ವಿಶ್ವ UFO ದಿನ
- ಜುಲೈ 4, 2025: ಅಮೆರಿಕ ಸ್ವಾತಂತ್ರ್ಯ ದಿನ
- ಜುಲೈ 6, 2025: ವಿಶ್ವ ಝೂನೋಸಸ್ ದಿನ
- ಜುಲೈ 7, 2025: ವಿಶ್ವ ಚಾಕೊಲೇಟ್ ದಿನ
- ಜುಲೈ 7, 2025: ಜಾಗತಿಕ ಕ್ಷಮೆ ದಿನ
- ಜುಲೈ 10, 2025: ಜಾಗತಿಕ ಇಂಧನ ಸ್ವಾತಂತ್ರ್ಯ ದಿನ
- ಜುಲೈ 10, 2025: ಗುರು ಪೂರ್ಣಿಮೆ
- ಜುಲೈ 11, 2025: ವಿಶ್ವ ಜನಸಂಖ್ಯಾ ದಿನ
- ಜುಲೈ 12, 2025: ರಾಷ್ಟ್ರೀಯ ಸರಳತೆ ದಿನ
- ಜುಲೈ 12, 2025: ಕಾಗದದ ಚೀಲ ದಿನ
- ಜುಲೈ 12, 2025: ಮಲಾಲಾ ದಿನ
- ಜುಲೈ 13, 2025: ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ
- ಜುಲೈ 15, 2025: ವಿಶ್ವ ಯುವ ಕೌಶಲ್ಯ ದಿನ
- ಜುಲೈ 15, 2025: ಸಾಮಾಜಿಕ ಮಾಧ್ಯಮ ಚಾರಿಟಿ ದಿನ
- ಜುಲೈ 17, 2025: ಅಂತಾರಾಷ್ಟ್ರೀಯ ನ್ಯಾಯ ದಿನ
- ಜುಲೈ 17, 2025: ವಿಶ್ವ ಎಮೋಜಿ ದಿನ
- ಜುಲೈ 18, 2025: ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
- ಜುಲೈ 20, 2025: ಅಂತಾರಾಷ್ಟ್ರೀಯ ಚೆಸ್ ದಿನ
- ಜುಲೈ 22, 2025: ರಾಷ್ಟ್ರೀಯ ಧ್ವಜ ದಿನ
- ಜುಲೈ 22, 2025: ರಾಷ್ಟ್ರೀಯ ಮಾವಿನ ಹಣ್ಣು ದಿನ
- ಜುಲೈ 26, 2025: ಕಾರ್ಗಿಲ್ ವಿಜಯ ದಿವಸ
- ಜುಲೈ 27, 2025: ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ
- ಜುಲೈ 27, 2025: ರಾಷ್ಟ್ರೀಯ ಪೋಷಕರ ದಿನ
- ಜುಲೈ 28, 2025: ವಿಶ್ವ ಪ್ರಕೃತಿ ಸಂರಕ್ಷಣಾ ದಿನ
- ಜುಲೈ 28, 2025: ವಿಶ್ವ ಹೆಪಟೈಟಿಸ್ ದಿನ
- ಜುಲೈ 29, 2025: ಅಂತಾರಾಷ್ಟ್ರೀಯ ಹುಲಿ ದಿನ
- ಜುಲೈ 30, 2025: ಅಂತಾರಾಷ್ಟ್ರೀಯ ಸ್ನೇಹ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ