30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ; ಮೋದಿಗೆ ಆತ್ಮೀಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಇಂದು ಎರಡು ದಿನಗಳ ಭೇಟಿಗಾಗಿ ಘಾನಾಗೆ ಆಗಮಿಸಿದರು. ಈ ಸಮಯದಲ್ಲಿ ಅವರು ಪಶ್ಚಿಮ ಆಫ್ರಿಕಾದ ದೇಶದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಲಿದ್ದಾರೆ. ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರ ಆಹ್ವಾನದ ಮೇರೆಗೆ ಘಾನಾಗೆ ಭೇಟಿ ನೀಡುತ್ತಿರುವ ಮೋದಿ ಅವರಿಗೆ ಇಲ್ಲಿನ ಕೊಟೊಕಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಇದು ಘಾನಾಗೆ ಪ್ರಧಾನಿಯವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಮೂರು ದಶಕಗಳಲ್ಲಿ ಭಾರತದಿಂದ ಘಾನಾಗೆ ಪ್ರಧಾನಿಯವರ ಮೊದಲ ಭೇಟಿಯೂ ಇದಾಗಿದೆ.
ಘಾನಾ, ಜುಲೈ 2: 2 ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಘಾನಾಗೆ ಆಗಮಿಸಿದ್ದಾರೆ. ಇದು 30 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಪಶ್ಚಿಮ ಆಫ್ರಿಕಾದ ರಾಷ್ಟ್ರಕ್ಕೆ ನೀಡಿದ ಮೊದಲ ಭೇಟಿಯಾಗಿದೆದೆ. ಈ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷವಾಗಿದೆ. ಘಾನಾಗೆ ಆಗಮಿಸಿದ ನರೇಂದ್ರ ಮೋದಿಗೆ ಗೌರವ ರಕ್ಷೆ ಮತ್ತು 21 ಗುಂಡುಗಳ ಸೆಲ್ಯೂಟ್ ಸೇರಿದಂತೆ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಘಾನಾದ ಅಧ್ಯಕ್ಷ ಜಾನ್ ಮಹಾಮ ಅವರು ಭಾರತೀಯ ಪ್ರಧಾನಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಭೇಟಿಯು ಪಶ್ಚಿಮ ಆಫ್ರಿಕಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಘಾನಾದೊಂದಿಗೆ ಭಾರತದ ಸಂಬಂಧದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ರಾಜತಾಂತ್ರಿಕ ಪ್ರವಾಸವು ಭಾರತ ಮತ್ತು ಘಾನಾ ನಡುವಿನ ಸಂಬಂಧಗಳನ್ನು ಬಲಪಡಿಸಲಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋದಿ ಸ್ವಾಗತಕ್ಕೆಂದು ಏರ್ಪೋರ್ಟ್ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು

ಪೋರ್ಟ್ ಆಫ್ ಸ್ಪೇನ್ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ

ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ

ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
