ಭೂ ಸುಧಾರಣಾ ಯೋಜನೆ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ

Updated on: Jul 03, 2025 | 7:08 PM

ಜನರ ಭೂ ದಾಖಲೆ ಪ್ರಮಾಣೀಕೃತ ಪ್ರತಿ ಈ ಮೇಲ್ ಮೂಲಕ ಅವರು ಇದ್ದ್ದಲ್ಲಿಗೆ ಕಳಿಸುವ ವ್ಯವಸ್ಥೆಯನ್ನು ಮಾಡಿದ್ದೇವೆ, ಇದನ್ನು ಅವರು ತಮ್ಮ ಕಂಪ್ಯೂಟರ್ ಮೂಲಕ ಬ್ಯಾಂಕಿಗೂ ಕಳಿಸಬಹುದು, ಇಲ್ಲವೇ ಮತ್ಯಾವುದೇ ಕಚೇರಿಯಲ್ಲಿ ದಾಖಲೆಯ ಅಗತ್ಯವಿದ್ದರೆ ಕಳಿಸಬಹುದು, ಅದರಲ್ಲಿ ಈ-ಸಹಿ ಇರೋದ್ರಿಂದ ಅಟೆಸ್ಟೇಶನ್ ಬೇಕಾಗಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಬೆಂಗಳೂರು, ಜುಲೈ 3: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಅವರ ಇಲಾಖೆ ಜಾರಿಗೆ ತಂದಿರುವ ಭೂ ಸುಧಾರಣಾ ಯೋಜನೆಯ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದರು. ಇಂಥ ಯೋಜನೆ ಭಾರತದ ಯಾವ ರಾಜ್ಯದಲ್ಲೂ ಇಲ್ಲ, ನಮ್ಮ ಉದ್ದೇಶವೆಂದರೆ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಜನ ತಮ್ಮ ಮನೆಯಲ್ಲೇ ಕೂತು ಪಡೆದುಕೊಳ್ಳುವಂತಾಗಬೇಕು, ಕಚೇರಿಯಿಂದ ಕಚೇರಿಗೆ ಅಲೆದಾಟ ಆಗಬಾರದು ಅನ್ನೋದು ಎಂದು ಸಚಿವ ಹೇಳಿದರು. ಈ ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪ ಇರೋದಿಲ್ಲ, ಮೊದಲಾದರೆ ಜನ ರೆಕಾರ್ಡ್​ ರೂಮಿಗೆ ಹೋಗಿ ಅರ್ಜಿ ನೀಡಿದ ಬಳಿಕ ಅಲ್ಲಿನ ಶಿರಸ್ತೇದಾರ್ ಅದನ್ನು ಅಪ್ಲೋಡ್ ಮಾಡುತ್ತಿದ್ದರು ಎಂದು ಹೇಳಿದ ಕೃಷ್ಣ ಭೈರೇಗೌಡ, ಈಗಲೂ ಜನ ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಜನಸ್ನೇಹಿ ಕೇಂದ್ರ ಇಲ್ಲವೇ ತಾಲೂಕು ಕಚೇರಿಗಳಿಗೆ ಹೋಗಬಹುದು ಎಂದರು.

ಇದನ್ನೂ ಓದಿ:   ಕಾಂಗ್ರೆಸ್ ಸಾಧನಾ ಸಮಾವೇಶ: ಶಾಶ್ವತ ಹಕ್ಕು ಪತ್ರ ವಿತರಿಸಿದ ಸಂದರ್ಭವನ್ನು ಐತಿಹಾಸಿಕವೆಂದ ಕೃಷ್ಣ ಭೈರೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

OSZAR »