Pic credit - Instagram

Author: Rajesh Duggumane

26  June 2025

ಮಲ್ಟಿಪ್ಲೆಕ್ಸ್​ನಿಂದ  ಕಮಲ್ ಹಾಸನ್​ಗೆ ದಂಡದ ಬರೆ 

ಥಗ್ ಲೈಫ್ 

ಥಗ್ ಲೈಫ್ ಸಿನಿಮಾ ನಿರ್ಮಾಣ ಮಾಡಿ ಕಮಲ್ ಹಾಸನ್ ಅವರು ದಂಡದ ಬರೆ ಹಾಕಿಸಿಕೊಂಡಿದ್ದಾರೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ. 

ಮೊದಲೇ ಕಷ್ಟ 

ಸಿಂಬು, ಕಮಲ್ ಹಾಸನ್ ಅವರ ಸಿನಿಮಾ ಹೀನಾಯ ವಿಮರ್ಶೆ ಪಡೆದು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಈಗ ಮಲ್ಟಿಪ್ಲೆಕ್ಸ್​​ ಕಡೆಯಿಂದ ಅವರಿಗೆ ತೊಂದರೆ ಆಗಿದೆ. 

ನಾಲ್ಕೇ ವಾರ 

ಒಟಿಟಿಗೆ ಈ ಚಿತ್ರವನ್ನು ನಾಲ್ಕೇ ವಾರಕ್ಕೆ ತರಲು ನಿರ್ಮಾಪಕ ಕಮಲ್ ಹಾಸನ್ ನಿರ್ಧರಿಸಿದ್ದಾರೆ. ಈ ಮೊದಲು 8 ವಾರಗಳ ಒಪ್ಪಂದವನ್ನು ಅವರು ಮಾಡಿಕೊಂಡಿದ್ದರು. 

ಜನ ಬರ್ತಿಲ್ಲ

ಥಿಯೇಟರ್​​ಗಳಿಗೆ ಜನರು ಬರುತ್ತಿಲ್ಲ. ಹೀಗಾಗಿ, ಒಟಿಟಿಗೆ ಈ ಚಿತ್ರವನ್ನು ನಾಲ್ಕೇ ವಾರಗಳಲ್ಲಿ ತರಲು ಕಮಲ್ ಹಾಸನ್ ಅವರು ಒಪ್ಪಿಗೆ ಕೊಟ್ಟಿದ್ದಾರೆ. 

ಸಿಟ್ಟಾದ ಮಲ್ಟಿಪ್ಲೆಕ್ಸ್ 

ಮಲ್ಟಿಪ್ಲೆಕ್ಸ್​ಗಳ ಜೊತೆ ಕಮಲ್ ಹಾಸನ್ ಅವರು ಎಂಟು ವಾರಗಳ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈಗ ಅದನ್ನು ನಾಲ್ಕು ವಾರಕ್ಕೆ ಇಳಿಸಿದ್ದಾರೆ. 

ದಂಡ 

ಕಮಲ್ ಹಾಸನ್ ಅವರಿಗೆ ಈಗ ದಂಡದ ಬರೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಮಲ್ಟಿಪ್ಲೆಕ್ಸ್​ನವರು ಕಮಲ್ ಹಾಸನ್​​ಗೆ ದಂಡ ಹಾಕಿದ್ದಾಗಿ ವರದಿ ಆಗಿದೆ. 

ಕರ್ನಾಟಕದಲ್ಲಿಲ್ಲ ರಿಲೀಸ್ 

ಈವರೆಗೆ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗೇ ಇಲ್ಲ. ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗುವುದೂ ಇಲ್ಲ ಎಂಬುದು ಸ್ಪಷ್ಟವಾಗಿದೆ. 

ದೊಡ್ಡ ನಷ್ಟ

ಕಮಲ್ ಹಾಸನ್ ಅವರು ದೊಡ್ಡ ನಷ್ಟ ಅನುಭವಿಸಿದ್ದಾರೆ. ಅವರಿಗೆ ಸಾಕಷ್ಟು ತೊಂದರೆ ಆಗಿದೆ. ಅವರು ಸಾಕಷ್ಟು ನಷ್ಟದಲ್ಲಿ ಇದ್ದಾರೆ. 

OSZAR »